ಶುಕ್ರವಾರ, ಆಗಸ್ಟ್ 5, 2011

ಬುಧವಾರ, ಅಕ್ಟೋಬರ್ 21, 2009

ಸಹಸ್ರಾಕ್ಷ ವೈದ್ಯ ಶಾಲಾ

ಸೋಮವಾರ, ಏಪ್ರಿಲ್ 20, 2009

ಮಂಕುತಿಮ್ಮನ ಕಗ್ಗ

ಕನ್ನಡದ ಕವಿ ಡಿ ವಿ ಜಿ ಯವರ ಮಂಕುತಿಮ್ಮನ ಕಗ್ಗ ನಿಜವಾಗಿಯೂ ಕನ್ನಡದ ಭಗವದ್ಗೀತೆ ಕಗ್ಗದ ಕೆಲವು ಉಕ್ತಿಗಳನ್ನು ಸಂಗ್ರಹಿಸುವುದೇ ನನ್ನೀ ಪ್ರಯತ್ನ ()
  • ನರನಾರಿಮೂಹದಿಂ ವಂಶವದಕಾಗಿ ಮನೆ
  • ನೆರೆಹೊರೆಗಳೂರು ರಾಷ್ಟ್ರಗಳು ಸಂಘಗಳು
  • ಕೆರೆಯೊಂದು ಕೇಂದ್ರದಿಂದಲೆಯ ಬಳೆಗಳು ನೂರು
  • ಹರಿವಂತೆ ಸಂಸಾರ -ಮಂಕುತಿಮ್ಮ (೨)
ಸುಳಲ್ಲ ಕಥೆಯು ತಿರುಕನು ಕಂಡ ಸವಿಗನಸು
ಚೆಲ್ಲಿತಲ್ಲವೇ ಹಿಟ್ಟು ಘಟವನವನೂದೆಯೇ ? ಜಳ್ಳುಸುಖದುಃಖವಿರಬಹುದದೂಡದರ ಮೂನೆ
ಮುಳ್ಳುಹುದು ಜೀವಕ್ಕೆ -
ಮಂಕುತಿಮ್ಮ
ಕನ್ನಡ powered by Lipikaar.com

(೩)
ದಾಸರೋ ನಾವೆಲ್ಲ ಶುನಕನಂದದಿ ಜಗದ
ವಾಸನೆಗಳೆಳೆತಕ್ಕೆ ದಿಕ್ಕುದಿಕ್ಕಿನಲಿ
ಪಾಶಗಳು ಹೊರಗೆ , ಕೂಂಡಿಗಳು ನಮ್ಮೊಳಗಿಹುವು
ವಾಸನಾಕ್ಷಯ ಮೋಕ್ಷ -ಮಂಕುತಿಮ್ಮ

(೪)
ಗ್ರಹ ಗತಿಯ ತಿದ್ದುವನೆ ಜೋಯಿಸನು ಜಾತಕದಿ ?
ವಿಹಿತವಾಗಿಹುದದರ ಗತಿ ವಿದಿಯಮ್
ಸಹಿಸಿದಲ್ಲದೆ ಮುಗಿಯದಾವ ದೆಸೆ ಬಂದೊಡಂ
ಸಹನೆ ವಜ್ರದ ಕವಚ -ಮಂಕುತಿಮ್ಮ
(೫)
ಸತ್ಯ ಶಿವ ಸುಂದರದ ಸಚಿದಾನಂದನದ
ಭಿತ್ತಿಯಲಿ ಬಣ್ಣಬಣ್ಣದ ಜೀವಚಿತ್ರ
ನಿತ್ಯ ನೀನದ ನೆನೆದು ಚಿತ್ರದಲಿ ಮನವಿರಿಸೆ
ವೃತ್ತಿ ತನ್ಮಯವಹುದೂ -ಮಂಕುತಿಮ್ಮ
(೬)
ಪಾಪವೆಂಬುದದೆನು ಸುಲಭ ಸಾಧನೆಯಲ್ಲ
ತಾಪದಿಂ ಬೇಯದವನ ಅದನೆಸೆಪನಲ್ಲ
ವಾಪಿಯಾಳವ ದಡದಿ ನಿಂತಾತನರಿವನೇಂ ?
ಪಾಪಿಯೆದೆಯೊಳಕಿಳಿಯೊ - ಮಂಕುತಿಮ್ಮ
(೭)
ಆನೆಗಾರ್ ಇರುವೆಗಾರ್ ಕಾಗೆಗಾರ್ ಕಪ್ಪೆಗಾರ್
ಕಾಣಿಸುವವರನ್ನವನು ? ಹಸಿವವರ ಗುರುವು
ಮಾನವನುಮಂತುದರ ಶಿಷ್ಯನವನಾ ರಸನೆ
ನಾನಾವಯವಗಳಲಿ -ಮಂಕುತಿಮ್ಮ

ಶನಿವಾರ, ಏಪ್ರಿಲ್ 11, 2009

ಗುರುವಾರ, ಏಪ್ರಿಲ್ 2, 2009

ನಮ್ಮೂರು

ಹುಲಿ ವೇಷ ಕರಾವಳಿ ಪ್ರದೇಶದ ಸಂಸ್ಕೃತಿಗೆ ಒಂದು ಕೋಡು

ಕನ್ನಡ powered by Lipikaar

ಭಾನುವಾರ, ಮಾರ್ಚ್ 29, 2009

ಜನನೀ ಜನ್ಮಭೂಮಿ ಸ್ವರ್ಗಾದಪಿ ಗರೇಯಸಿ

ತಾಯಿ ಮತ್ತು ತಾಯಿ ನಾಡು ನಮ್ಮ ಎಲ್ಲ ಸಾದನೆಗಳಿಗೆ ಕಾರಣಶಕ್ತಿ ಯಾಗಿರುತ್ತದೆ .ತಾಯಿ ಯಾದವಳು ಒಂಬತ್ತು ತಿಂಗಳುಹೊತ್ತು ಹೆತ್ತು ಸಾಕಿ ಸಲಹಿ ತಾತ್ತನವನ್ನು ಸಾರ್ಥಕಪಡಿಸುತಾಳೆ

ಬುಧವಾರ, ಮಾರ್ಚ್ 25, 2009

ನಾಗಮಂಡಲ -ಪ್ರಕೃತಿ ಅರಾದನೆ


ತುಳುನಾಡಿನ ಹಲವು ದಾರ್ಮಿಕ ಆಚರಣೆಗಳಲ್ಲಿ ನಾಗ (ಸರ್ಪ ) ಆರಾದನೆಯು ತನ್ನದೇ ಅದ ಮಹತ್ವವನ್ನು ಹೊಂದಿದೆ . ಆಶ್ಲೇಷಬಲಿ, ನಾಗ ತಂಬಿಲ ,ನಾಗ ಮಂಡಲ ಸೇವೆ ಇಂದ ನಾಗನನ್ನು ಆರಾದಿಸಿ ತಮ್ಮ ಭಕ್ತಿ ಯನ್ನು ಸಮರ್ಪಿಸುತ್ತಾರೆ .ನಾಗರಾದನೆಒಂದು ರೀತಿಯಲ್ಲಿ ಪ್ರಕೃತಿ ಅರಾದಾನೆ. ಉರಗ ಸಂತತಿಯ ಉಳಿವು ಮತ್ತು ನಾಗ ಬನದ ಹೆಸರಲ್ಲಿ ಮರಗಿಡಗಳ ನಾಶತಪ್ಪುತ್ತದೆ.
ಆನಾದಿ ಕಾಲದಿಂದಲೂ ಪ್ರಕೃತಿಯ ಮಡಿಲಲ್ಲೇ ಬೆಳೆದು ,ಪ್ರಕೃತಿಯಲ್ಲೇ ಒಂದಾಗಿ ಹಲವು ಆಚರಣೆಗಳನ್ನು ಆಚರಿಸುತ್ತಾ ಬಂದನಾವು ಇಂದು ಇವೆಲ್ಲವನ್ನೂ ಮರೆಯುತ್ತಾ ಬರುತ್ತಿದೇವೆ .ಇಂದಿನ ಅಧುನಿಕ ಜಗತ್ತಿನಲ್ಲಿ ಕೆಲವು ಆಚರಣೆಗಳದರೂ ತನ್ನ ಮೌಲ್ಯಗಳನ್ನು ಕಳಕೊಂಡಿಲ್ಲವೆಂಬುದೆ ಸಂತತದ ವಿಷಯ .

ಮಂಗಳವಾರ, ಮಾರ್ಚ್ 24, 2009

ಹಾಗೆ ಸುಮ್ಮನೆ






ಚಿತ್ರಕಲೆ




ಕಲಾಕಾರನಿಗೆ ನಮನ

ಕನ್ನಡ powered by Lipikaar

ಮನಸೇ ನೀ ಮರುಗದಿರು

ಮನಸೇ ನೀ ಕಲ್ಲಾಗು . ಎಲ್ಲದಕೂ ನೀನೆ ಹೊಣೆಗಾರನಾಗಬೇಡ. ಸುಖ ದುಖಗಳನ್ನೂ ಸಮನಾಗಿ ಸ್ವೀಕರಿಸು.
ಸೋಲು ಶಾಶ್ವತವಲ್ಲ .ಪ್ರಯತ್ನವೋಂದೆ ನಮ್ಮ ಪಾಲಿನ ಅಸ್ತ್ರ . ಪುಟ್ಟ ಮಗುವೋಂದು ಬಿದ್ದು ಬಿದ್ದು ನಡೆವಂತೆ ಪ್ರತಿ ಸಲವೂಬಿದ್ದಾಗ ಬಿದ್ದ
ನೆನಪಿಟ್ಟು ಮತ್ತೆ ತಪ್ಪದಂತೆ ಪ್ರಯತ್ನೀಸಿದೊಡೆ ಯಶ ಖಂಡಿತ ಗೆಳೆಯ .ಕ್ಷಣ ಮಾತ್ರದ ನಿನ್ನ ಲೋಭಕ್ಕೆ ನಾನುಬಲಿಯಾಗಿ ತಪ್ಪ ಮಾಡಲು ನೀ ಕಾರಣವಗಬೇಡ.ನಾನು ಇಟ್ಟ ಗುರಿಯಲ್ಲಿ ನನ್ನ ಆಚಲವಾಗಿಸು.ನಾನು ನಂಬಿದ ಆದರ್ಶಗಳಿಗೆಭದ್ದನಾಗಿಸು.

ಸಹಸ್ರಾಕ್ಷ ವೈದ್ಯ ಶಾಲಾ ಉಕ್ಕಿನದ್ಕ


ಸಹಸ್ರಾಕ್ಷ ವೈದ್ಯ ಶಾಲಾ ಉಕ್ಕಿನಡ್ಕದಲ್ಲಿ --೨೦೦೯ ರಂದು ಡಾ ಪಿ ನಾರಾಯಣ ಭಟ್ಸ್ಮಾರಕ ಆಸ್ಪತ್ರೆಯಲ್ಲಿ ೨೦ ಹಾಸಿಗೆಗಳುಳ್ಳ ವೃದ್ಧ ಶೂಶೃಶಾ ಕೇಂದ್ರ ಮತ್ತು ಸ್ಥಾಪಕನಾರಾಯಣ ಭಟ್ ರವರ ೧೦ ಪುಣ್ಯತಿಥಿ ಸಂಸ್ಮರಣೆ ಕಾರ್ಯಕ್ರಮದ ಉದ್ಘಾಟನೆಮಂಜೇಶ್ವರ ಶಾಶಕರಿಂದ ನೆರವೇರಿತು .
ಆಯುರ್ವೇದ ವೈದ್ಯ ಪದ್ದತಿಯಲ್ಲಿ ತನ್ನದೇ ಅದ ಹೊಸ ಆವಿಷ್ಕಾರ ಮತ್ತು ಚಿಕಿತ್ಸಾ
ವಿದಾನಗಳಿಂದ ಕೇರಳ ಕರ್ನಾಟಕಗಳ್ಳಲ್ಲಿ ಸಹಸ್ರಾರು ರೋಗಿಗಳು ಸಂಪೂರ್ಣ ಗುಣಮುಖರಾಗಿದ್ದಾರೆ . ಸಂಸ್ಥೆಮಂಗಳೂರಿನಲ್ಲಿ ವರ್ಷಗಳ ಹಿಂದೆಯೇ ಶಾಖೆಯನ್ನು ತೆರೆದದ್ದು ,ಬೆಂಗಳೂರಿನಲ್ಲಿ ಹನುಮಂತನಗರ ಮತ್ತು ಮಲ್ಲೇಶ್ವರಂಗಳಲ್ಲಿ
ಶಾಖೆಯನ್ನು ಹೊಂದಿದೆ .
ಹೆಚ್ಹಿನ ವಿವರಗಳಿಗಾಗಿ ಬ್ಲಾಗ್ನಲ್ಲಿರುವ ವೆಬ್ ಸೈಟ್ ಲಿಂಕ್ ಕಿಕ್ಕಿಸಿ

ಸಹಸ್ರಾಕ್ಷ ವೈದ್ಯ ಶಾಲಾ ಉಕ್ಕಿನಡ್ಕ



ಸಹಸ್ರಾಕ್ಷ ವೈದ್ಯ ಶಾಲಾ ಉಕ್ಕಿನಡ್ಕ ಕೇರಳೀಯ ಆಯುರ್ವೇದ ಸಂಸ್ಥೆ ಯಾಗಿದ್ದು ಕಳೆದ ೭೫ ವರ್ಷಗಳಿಂದ ಕೇರಳ ಮತ್ತುಕರ್ನಾಟಕದಲ್ಲಿ ಜನಪ್ರಿಯತೆಯನ್ನು ಹೊಂದಿದ್ದು, ಉಕ್ಕಿನಡ್ದ್ಕದಲ್ಲಿ ೩೦ ಹಾಸಿಗೆಯ ಸುಸಜ್ಜಿತ ಆಸ್ಪತ್ರೆ ವೃದ್ಧ ಶ್ರುಶುಶಾ ಕೇಂದ್ರಮತ್ತು ಜಿ ಯಮ್ ಪಿ ಮಾನ್ಯತೆ ಪಡೆದ ಔಷದ ತಯಾರಿಕಾ ಘಟಕವನ್ನು ಹೊಂದಿದೆ.

ಸಂಸ್ಥೆಯು ಬೆಂಗಳೂರಿನಲ್ಲಿಯೂ ತನ್ನ ಎರಡು ಶಾಖೆ ಗಳಾದ ಹನುಮಂತನಗರ ಮತ್ತು ಮಲ್ಲೇಶ್ವರಂ ನಲ್ಲಿ ತಜ್ಞ ವೈದ್ಯರಮಾರ್ಗದರ್ಶನದೊದಿಂಗೆ ಚಿಕಿತ್ಸೆ ನೀಡುತ್ತಿದೆ . ಹೆಚ್ಚಿನ ವಿವರಗಳಿಗೆ ವೆಬ್ ಲಿಂಕ್ನಲ್ಲಿರುವ ಹೆಸರನ್ನು ಕಿಕ್ಕಿಸಿ

ಅರಿವು


ಸಮಾಜದ ಆಗು ಹೋಗುಗಳ ಮೇಲೆ ಬೆಳಕು ಚೆಲ್ಲುವ ಲೇಖನ

ಸೋಮವಾರ, ಮಾರ್ಚ್ 23, 2009

ನಮ್ಮೂರ ಜಾತ್ರೆ



ನಮ್ಮೂರು
ಕಣಂತೂರಿನಲ್ಲಿ ನಡೆದ ಉಳ್ಳಲ್ತಿ ನೇಮದ ದೃಶ್ಯ

ಹಿಂದೂ ಧರ್ಮ

ರಾಮಾಯಣ ಮಹಾಭಾರತ ಭಗವದ್ಗೀತೆ ಮುಂತಾದ ನಿತ್ಯಸತ್ಯವಾದ ಗ್ರಂಥಗಳಿಂದ ಕಾಲ ಕಾಲಕೆ ಅವತಾರ ತಾಳಿದ ಶ್ರೀರಾಮಚಂದ್ರ ಶ್ರೀಕೃಷ್ಣ , ಶಂಕರ ,ರಾಮಾನುಜ ಮದ್ವಾಚರ್ಯರೆ ಮೊದಲಾದ ಪುಣ್ಯ ಪುರುಷರಿಂದ ಜಗದಲ್ಲೆಡೆ ಹರಡಿದ ಹಿಂದೂ ಧರ್ಮ ಇಂದು ಅನ್ಯ ಧರ್ಮದ ದಾಳಿಗೆ ತುತ್ತಾಗುತ್ತಿದೆ .
ಇಸ್ಲಾಂ ಧರ್ಮವು ಹಿಂದೂ ಧರ್ಮದ ತಳಹದಿಯಲ್ಲೇ ಇದೆ .ಯೇಸುಕ್ರಿಸ್ಥನು ಹಿಂದೂ ಧರ್ಮ ಹಲವು ತತ್ವಗಳನ್ನು ತಮ್ಮಲ್ಲಿ
ಅಳವಡಿಸಿದ .ಶಾಂತಿಯನ್ನು ಭೋದಿಸಿದ .ತನ್ನ ವೈರಿಗಳನ್ನೇ ಪ್ರೀತಿಸಿ ಎಂಬ ಸಂದೇಶವನ್ನು ಜಗಕೆ ಸಾರಿದ ಅದರಂತೆ ನಡೆದುಅಮರನಾದ.ಆದರೆ ಇಂದು ಅದೇ ಧರ್ಮದಿಂದ ಮತಾಂತರದ ಹೆಸರಲ್ಲಿ ದಬ್ಬಾಳಿಕೆ ನಡೆಯುತ್ತಿದೆ (ಹೇ ರಾಮ )
ಹಿಂದುಗಳೇ ಸ್ವಲ್ಪ ಯೋಚಿಸಿ ! ಹಿಂದೂ ಧರ್ಮ ನಮಗೆ ನಮ್ಮವರಿಗೆ ದೇಶಕ್ಕೆ ಕೊಟ್ಟ ಕೊಡುಗೆ ಅಪಾರ .ಹಿಂದೂ ಧರ್ಮದಲ್ಲಿಮೇಲು -
ಕೀಳು ಮೇಲ್ಜಾತಿ -ಕೆಳಜಾತಿ ಇದು ನಾವೇ ರಚಿಸಿದ ಅಂತರ ,ಇವೆಲ್ಲವನ್ನು ಬದಿಗಿರಿಸಿ ನಮ್ಮ ಪವಿತ್ರ ಧರ್ಮದಮೇಲಾಗುತ್ತಿರುವ ದಾಳಿಯನ್ನು ಎದುರಿಸಿ ಪ್ರಪಂಚದಲ್ಲಿ ಹಿಂದೂ ಧರ್ಮ ಸದಾ ಜಾಗ್ರತ ಜ್ಯೋತಿಯಾಗಿರಲಿ ಎಂದೇ ಅಶಿಶೋಣ.
ಜಾತಿಗೊಂದು ಮಠ ,ದೇವಸ್ಥಾನಗಳನ್ನು ರಚಿಸಿ ನಮ್ಮ ನಡುವೆ ಅಭಿಪ್ರಾಯ ಬೇದವನ್ನು ತಂದು ತನ್ನ ಕಾರ್ಯವನ್ನು ಮಾಡುವಸ್ವಾರ್ಥ ಹಿತಾಸಕ್ತಿಗಳ ಕುತಂತ್ರಕ್ಕೆ ಹಿಂದೂ ಧರ್ಮ ಶರಣಾಗುತ್ತಿದೆ. ಗೋವು ಹತ್ಯೆ ಮಹಾಪಾಪ , ಗೋವುಗಳ ರಕ್ಷಣೆಯನ್ನುಮಾಡಿ ಎಂದೆಂಬ ಮಾತು ಜಗದಗಲ ಕೇಳಿದರೂ ಅಲ್ಲೂ ಜಾತಿ ಲೆಕ್ಕಾಚಾರದಲ್ಲಿ ಮುಳುಗಿರುವ ನಮ್ಮೆಲ್ಲರ ಸಂಕುಚಿತ ಹೊಲಸುತುಂಬಿದ ಮನಸನ್ನು ಸುದ್ದಿಕರಿಸಿ ಧರ್ಮವನ್ನು ರಕ್ಷಿಸಿ ನಮ್ಮನ್ನು ರಕ್ಷಿಸಿಕೊಳ್ಳೋಣ.
ಹರೇ ರಾಮ







ಶನಿವಾರ, ಮಾರ್ಚ್ 21, 2009

ಆರೋಗ್ಯ ಭಾಗ್ಯ
ಆರೋಗ್ಯವಂತ ಜೀವನ ಎಲ್ಲರ ಕನಸು .ಆದರೆ ಅದು ಇಂದು ಸಾದ್ಯ್ಯವಾಗುತ್ತಿಲ್ಲ ನಮ್ಮ ಜೀವನಶೈಲಿ ಇದಕ್ಕೆಲ್ಲ ಕಾರಣ .ಹಣ ಗಳಿಸಬೇಕೆಂಬ ಉದ್ದೆಶದಿಂದ ಎಲ್ಲವನ್ನು ನಿರ್ಲಕ್ಷಿಸುತ್ತಿದೆವೆ ನಮ್ಮ ಹಿರಿಯರು ಉಪಯೋಗಿಸಿ ಯಶಕಂಡ ಮನೆಮದ್ದುಗಳು ನಮಗ ತಿಳಿದಿಲ್ಲ. ಬಹೂಪಯೊಗಿ ಬಜೆ, ಶತಾವರಿಯಂಥ ಸ್ಥಳೀಯವಾಗಿ ದೊರೆಯುವ ಬೇರು ,ಕೆತ್ತೆ, ಎಲೆಗಳು ನಾವು ಮರೆತೇ ಹೋಗಿದ್ದೇವೆ . ಇಂಥಹ ನಿಸರ್ಗದತ್ತವಾದ ಮೂಲಿಕೆಗ ಮೂಲಕ ಯಾವುದೇ ಅಡ್ಡ ಪರಿಣಾಮಗಳಿಲ್ಲದ ಚಿಕಿಸ್ತ್ಸೆ ನೀಡುವ ಪದ್ದತಿ ಇಂದು ಜನಪ್ರಿಯ ಆಯುರ್ವೇದವಾಗಿದೆ .
ಆಯುರ್ವೇದ ವಾತ ರೋಗಗಳಿಗೆ (ಮುಖ್ಯವಾಗಿ ಆಮವಾತ, ಸಂಧಿ ವಾತ , ಪಕ್ಷವಾತ ) ಅತ್ಯಂತ ಪರಿಣಾಮಕಾರಿ ಚಿಕಿಸ್ತ್ಸಾಪದ್ದತಿ

ಗೋವು ವಿಶ್ವದ ಮಾತೆ
ಮಕ್ಕಳಿರಲವ್ವ ಮನೆತುಂಬ (ಹಳೆ ಮಾತು ) ದನಕರು ಹಟ್ಟಿ ತುಂಬಾ ಇರಲಿ . ಆನಾದಿ ಕಾಲದಿಂದಲೂ ಪೂಜಿಸಲು ಯೋಗ್ಯವಾಗಿ ಹಾಲು ನೀಡುವ ತಾಯಿಯಾಗಿ ಕರುಣಾ ಸಾಗರವಾಗಿ ಲೋಕವನ್ನೇ ಪೊರೆಯುವ ತಾಯಿಗೆ ದಿನನಿತ್ಯವೂ ನಮಿಸಿ ,ರಕ್ಷಿಸಿ ತಾಯಿ ಸೇವೆಗೆ ಮುಂದಾಗೋಣ .
ಗುರು ರಾಘವೇಶ್ವರ ಭಾರತೀ ಸ್ವಾಮಿಗಳ ಮಹಾ ಸಂಕಲ್ಪಕ್ಕೆ ಪೂರ್ಣ ಯಶ ಸಿಗಲಿ .
ವಂದೇ ಗೊಮಾತಾರಂ
ಬದುಕು ಸುಂದರ ಸಾರ್ಥಾಕವಗಿರಲಿ

ಎಲ್ಲರೂ ಚೆನ್ನಾಗಿರಲಿ ! ಈ ಮಾತು ನಮಗೆ ಮರೆತೇ ಹೋಗಿದೆ . ನಾನೆಂಬ ಸಂಕೀರ್ಣತೆ ಬೆಳೆಯುತ್ತಿದೆ . ಒಂದು ಹಂತದವರೆಗೆ ಹೆತ್ತವರು ನಂತರ ಸಂಸಾರ , ಹೀಗೆ ಯಾವಾಗಲು ನಾನು ನಾನೆ ಆಗಿ , ಬೇರೇನನ್ನು ಯೋಚಿಸದೆ ಕಾಲವನ್ನು ಕಳೆಯುವ ನಾವೇ ಮನುಜರು (!) ಮರ ತನಗೆ ಕಲ್ಲೆಸದವಗೆ ಹಣ್ಣ ನೀವಂತೆ ನಾವೆಲ್ಲ ಪರೋಪಕಾರಿಗಳಾಗಿ ಸಾರ್ಥಕ ಲೋಕ ಸಮಸ್ತರ ಸುಖವನ್ನು ಬಯಸುತ್ತ ಸುಂದರ ಬದುಕನ್ನು ರೂಪಿಸುವ
.

ಶ್ರೀರಾಘವೇಶ್ವರ ಭಾರತೀ ಸ್ವಾಮಿಗಳು ಹೊಸನಗರ ಮಠ

ದೇಶೀಯ ಗೋ ತಳಿಯ ಸಂರಕ್ಷಣೆ ಮತ್ತು ತಳಿ ಅಭಿವೃದ್ದಿ , ಪುರಾಣ ಪ್ರಸಿದ್ದ ಗೋಕರ್ಣ ದೇವಾಲಯದ ಪುನರುತ್ತಾನ ಮಹಾ ಸಂಕಲ್ಪ
ಕನ್ನಡ powered by Lipikaar

ಗುರುವಾರ, ಮಾರ್ಚ್ 19, 2009

ಬಜನೆ ಹರಿಎಡೆಗೆ ನರನನ್ನು ಕೊಂಡೋಯ್ಯುವ ಹರಿಗೋಲು



ಕನ್ನಡ powered by Lipikaar